ಕೋಲಾರದ ಚೌಡದೇನಹಳ್ಳಿಯಲ್ಲಿ ವಿಜೃಂಭಣೆಯ ಸಂಕ್ರಾಂತಿ ಆಚರಣ

0 300,443

ಕೋಲಾರದ ಚೌಡದೇನಹಳ್ಳಿಯಲ್ಲಿ ವಿಜೃಂಭಣೆಯ ಸಂಕ್ರಾಂತಿ ಆಚರಣ

ಸಡಗರ ಸಂಭ್ರಮ ಹಾಗೂ  ಭಕ್ತಿಯಿಂದ ಸಂಕ್ರಾಂತಿ ಆಚರಣೆ ಮತ್ತು ದೇವರ ಉತ್ಸವ ಕಾರ್ಯಕ್ರಮವು ಕೋಲಾರದ ತಾಲೂಕಿನ ಚೌಡದೇನಹಳ್ಳಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ರೈತರು ತಾವು ಸಾಕಿಸಲುಹಿದ ನೆಚ್ಚಿನ ಎತ್ತುಗಳು ಹಾಗೂ ಹಸುಗಳನ್ನು ವಿಧವಿಧವಾಗಿ ಅಲಂಕರಿಸಿ, ದೇವಸ್ಥಾನದ ಮುಂದೆ ಪೂಜಿಸಿ, ಊರಬಾಗಿಲಿನ ಮೂಲಕ ಕರೆ ತಂದು ಗ್ರಾಮದಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು, ಸಂಜೆ ಎತ್ತುಗಳಿಂದ ಕಿಚ್ಚು ಹಾಯಿಸ ಲಾಯಿತು.

ಆಧುನಿಕತೆ ಮತ್ತು ಯಾಂತ್ರಿಕತೆ, ಬರಗಾಲ, ರೋಗರುಜಿನಗಳು, ಬೆಲೆ ಏರಿದ ಪಶು ಆಹಾರ, ಹಸಿ ಮೇವಿನ ಕೊರತೆ ಪರಿಣಾಮ ಗ್ರಾಮಗಳಲ್ಲಿ ಈ ಹಿಂದೆ ಇದ್ದಷ್ಟು ರಾಸುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಕೃಷಿ ಜಾಗದಲ್ಲಿ ಟ್ರಾಕ್ಟರ್‌ಗಳು, ಟಿಲ್ಲರ್‌ಗಳು ಹಾಗೂ ಇತರೆ ಯಂತ್ರೋಪಕರಣಗಳು ಆವರಿಸಿಕೊಂಡಿದೆ.

ರಾತ್ರಿ ಗ್ರಾಮದ ಶಕ್ತಿ ದೇವತೆಗಳಾದ ಚೌಡೇಶ್ವರಿ ಹಾಗೂ ಗಂಗಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಯುವಕರು ಹೊತ್ತು ಉತ್ಸಾಹದಲ್ಲಿ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ದೇವತೆಗಳ ಹಲಗೆ ಸೇವೆ, ಪೂಜಾರಿಗಳಿಂದ ದೇವತೆಗಳನ್ನು ಹುರಿದುಂಬಿಸುವ ಮಂತ್ರ ದಂಡಕಗಳಿಂದ ಮೈದುಂಬಿದ ದೇವತೆಗಳ ಸಂಚಾರದ ದೃಶ್ಯವು ನೋಡುವುದೇ ಒಂದು ರೋಮಾಂಚನಕಾರಿಯಾಗಿತ್ತು. ಅಂತಿಮವಾಗಿ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಗಳಲ್ಲಿಟ್ಟು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಕ್ಕಳಿಂದಿಡಿದು, ಯುವಕರು ಹಲಗೆ ಸದ್ದಿಗೆ ಕುಣಿದು ಕುಪ್ಪಳಿಸಿದರು.*

Leave A Reply

Your email address will not be published.