ಹೆಲಿಕಾಪ್ಟರ್‌ ಭತ್ತದ ಗದ್ದೆಯಲ್ಲಿ ಮಾಡಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ.

0 8,778

ರಾಯಚೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಪ್ರಚಾರ ಕಾರ್ಯಕ್ರನಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಸಿಬ್ಬಂದಿಯ ಸೇನಾ ಪಡೆಯ ಹೆಲಿಕಾಪ್ಟರ್‌ ಭತ್ತದ ಗದ್ದೆಯಲ್ಲಿ ಮಾಡಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ.

ಕರ್ನಾಟಕದ ಭತ್ತದ ಕಣಜ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಚಾರಕ್ಕೆ ಬೃಹತ್‌ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸುತ್ತಿದ್ದ ನರೇಂದ್ರ ಮೋದಿ ಅವರಿಗೆ ಹೆಲಿಪ್ಯಾಡ್‌ ಸಿದ್ಧಪಡಿಸಲಾಗಿತ್ತು. ಆದರೆ, ಅವರ ಭದ್ರತಾ ಸಿಬ್ಬಂದಿಗೂ ಹೆಲಿಪ್ಯಾಡ್‌ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಿಂದ ತರಾತುರಿಯಲ್ಲಿ ಭತ್ತದ ಗದ್ದೆಯಲ್ಲಿ ಮಣ್ಣನ್ನು ಹಾಕಿ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. ಭಾರತೀಯ ಭದ್ರತಾ ಪಡೆಯ ಹೆಲಿಕಾಪ್ಟರ್‌ ಲ್ಯಾಂಡ್‌ ಆದ ತಕ್ಷಣ ಗದ್ದೆಯಲ್ಲಿ ಸಿಕ್ಕಿಕೊಂಡಿದೆ. ಸುಮಾರು 3 ಗಂಟೆಗಳಿಂದ ಹೆಲಿಕಾಪ್ಟರ್‌ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದರೂ ಸಫಲವಾಗಿಲ್ಲ.

ಸಿಂಧನೂರಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿಂಧನೂರು ಹೊರವಲಯದ ಹೊಸಳ್ಳಿ ಕ್ಯಾಂಪ್‌ನ ಪ್ರಚಾರ ಸಮಾವೇಶದ ವೇದಿಕೆ ಹಿಂಭಾಗ ನಿರ್ಮಿಸಲಾದ ಹೆಲಿಪ್ಯಾಡ್‌ನಲ್ಲಿ ಇಳಿದರು. ಈ ವೇಳೆ ಸೇನಾ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದು, ಸ್ಥಳೀಯ ಮುಖಂಡರು ಮೋದಿಯನ್ನು ಸ್ವಾಗತಿಸಿದರು. ಮೋದಿ ಹೆಲಿಕ್ಯಾಪ್ಟರ್ ಲ್ಯಾಂಡಿಗ್ ವೇಳೆ ಎಡವಟ್ಟು ಆಗಿದೆ. ಹೆಲಿಕ್ಯಾಪ್ಟರ್ ಗಾಳಿ ರಭಸಕ್ಕೆ ಮೋದಿ ಅವರ ಭದ್ರತಾ ಸಿಬ್ಬಂದಿಗೆ ಹಾಕಲಾಗಿದ್ದ ಟೆಂಟ್‌ ಹಾರಿ ಹೋಗಿದೆ. ಆದರೆ, ಮೋದಿ ಆಗಮಿಸಿದ ಹೆಲಿಪ್ಯಾಡ್ ನಲ್ಲಿ ಮತ್ತೊಂದು ಎಡವಟ್ಟು ಸಂಭವಿಸಿದೆ. ಕೆಸರಿನ ಗದ್ದೆಯಲ್ಲಿ ಸೇನಾ ಹೆಲಿಕ್ಯಾಪ್ಟರ್ ಸಿಲುಕಿಕೊಂಡಿದೆ. ಮಳೆಯಿಂದಾಗಿ ಹೆಲಿಪ್ಯಾಡ್ ಸಂಪೂರ್ಣ ಜಲಾವೃತವಾಗಿತ್ತು. ಅವಸರದಲ್ಲಿ ಹೆಲಿಪ್ಯಾಡ್ ಪುನಃ ಸಿದ್ಧಗೊಳಿಸಲಾಗಿದ್ದು, ಇದೀಗ ಸೇನೆಯ ಹೆಲಿಕಾಪ್ಟರ್‌ ಕೆಸರಿನಲ್ಲಿ ಸಿಲುಕಿದ್ದು, ಅದನ್ನು ಮೇಲೆತ್ತಲು ಸಿಬ್ಬಂದಿ ಹರಸಾಹರ ಮಾಡುತ್ತಿದ್ದಾರೆ.

ನೆಲದಿಂದ ಮೇಲಕ್ಕೇಳದ ಹೆಲಿಕ್ಯಾಪ್ಟರ್: ಇನ್ನು ಸೇನೆಯ ಹೆಲಿಕಾಪ್ಟರ್‌ ಮೇಲಕ್ಕೆತ್ತಲು ಹೆಲಿಪ್ಯಾಡ್‌ ಬಳಿಗೆ ಜೆಸಿಬಿಯನ್ನು ತೆಗೆದುಕೊಂಡು ಹೋಗಲಾಗಿತ್ತು. ಜೆಸಿಬಿಯಿಂದ ಮೇಲೆತ್ತಲು ಕಾರ್ಯಾಚರಣೆ ಮಾಡಿದರೂ ಯಾವುದೇ ಸಫಲತೆ ಕಂಡುಬಂದಿಲ್ಲ. ಸುಮಾರು 50 ಕ್ಕೂ ಹೆಚ್ಚು ಜನರಿಂದ ಹೆಲಿಕ್ಯಾಪ್ಟರ್ ಮೇಲೆಕ್ಕೆತ್ತುವ ಕಾರ್ಯ ನಡೆಯುತ್ತಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ಸತತ ಪ್ರಯತ್ನ ಮಾಡಿದರೂ ಸೇನಾ ಹೆಲಿಕಾಪ್ಟರ್‌ ಅನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಹೆಲಿಪ್ಯಾಡ್ ನಲ್ಲಿಯೇ ಉಳಿದ ಸೇನಾ ಹೆಲಿಕ್ಯಾಪ್ಟರ್. ತೇವಾಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ನಲ್ಲಿ ಹೆಲಿಕ್ಯಾಪ್ಟರ್ ಹಾಕಿಕೊಂಡಿದೆ.

Leave A Reply

Your email address will not be published.