ನವದೆಹಲಿ(ಜ.31): ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ಭುಗಿಲೇಳುವ ಎಲ್ಲಾ ಸಾಧ್ಯತೆ ಇದೆ. ಇದೀಗ ತಮಿಳುನಾಡು ಮತ್ತೆ ಕಾವೇರಿ ನೀರು ಕ್ಯಾತೆ ತೆಗೆದಿದೆ. ಹೊಸ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು, ಕಾವೇರಿ ನದಿ ನೀರಿನ ಜೊತೆಗೆ ಮೇಕೆದಾಟು ಯೋಜನೆಗೆ ತಡೆಯೊಡ್ಡಲು ಮಾಸ್ಟರ್ ಪ್ಲಾನ್ ಮಾಡಿದೆ.
ತಮಿಳುನಾಡು ಕಾವೇರಿಯಿಂದ ಬೆಂಗಳೂರು ನಗರಕ್ಕೆ ಬಳಕೆಯಾಗುವ ನೀರಿನ ಪ್ರಮಾಣವೆಷ್ಟು ಅನ್ನೋದನ್ನು ಪ್ರಶ್ನಿಸಿದೆ. ಬೆಂಗಳೂರಿಗೆ ಬಳಕೆಯಾಗುವ ನೀರಿನ ಪ್ರಮಾಣವನ್ನು ಲೆಕ್ಕಹಾಕಲು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಗ್ರಹಿಸಿದೆ.
ಕಾವೇರಿ ನದಿ ನೀರಿನ ಬಹುಪಾಲು ಬೆಂಗಳೂರಿಗೆ ಪೊರೈಕೆಯಾಗುತ್ತಿದೆ. ಇದರ ನಿಖರ ಪ್ರಮಾಣವೆಷ್ಟು? ಈ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಿಕ್ಕೆ ಸೂಚನೆ ನೀಡಲು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಮೂಲಕ ಕಾವೇರಿ ನದಿ ನೀರನ್ನು ಕರ್ನಾಟಕ ಅಸಮರ್ಪಕವಾಗಿ ಬಳಕೆ ಮಾಡುತ್ತಿದೆ. ಜೊತೆಗ ಸಿಂಹಪಾಲನ್ನು ಕೃಷಿ ಚಟುವಟಿಕೆ ಬದಲು ನಗರಕ್ಕೆ ಬಳಕೆ ಮಾಡುತ್ತಿದೆ ಅನ್ನೋದನ್ನು ಬಿಂಬಿಸಲು ಹೊರಟಿದೆ. ಇಷ್ಟೇ ಅಲ್ಲ ಇದೇ ವಿಚಾರ ಮುಂದಿಟ್ಟುಕೊಂಡು ಮೇಕೆದಾಟು ಯೋಜನೆಗೆ ತಡೆಯೊಡ್ಡಲು ತಮಿಳುನಾಡು ಮುಂದಾಗಿದೆ.