ಬೆಂಗಳೂರು(ಮೇ.02): ಮೋದಿ ವಿಷದ ಹಾವು ಇದ್ದ ಹಾಗೆ, ನೆಕ್ಕಿದರೆ ಸತ್ತು ಹೋಗುತ್ತೀರಿ ಎಂದು ಮಲ್ಲಿಕಾರ್ಜುನ ಖರ್ಗೆ ವೈಯುಕ್ತಿ ನಿಂದನೆ ಇದೀಗ ಕಾಂಗ್ರೆಸ್‌ಗೆ ಮುಳುವಾಗಿದೆ. ಈ ಕುರಿತು ಚುನಾವಣಾ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಖರ್ಗೆ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್‌ಗೆ ನಷ್ಟ ತರಲಿದೆ ಎಂದು ಶೇಕಡಾ 44 ರಷ್ಟು ಮಂದಿ ಹೇಳಿದ್ದಾರೆ. ಶೇಕಡಾ 34 ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ಗೆ ಹೊಡೆತ ನೀಡಲಿದೆ ಎಂದರೆ, ಕೇವಲ ಶೇಕಡಾ 24 ರಷ್ಟು ಜನ ಮಾತ್ರ ಇಲ್ಲ ಎಂದಿದ್ದಾರೆ. ಇನ್ನು ಈ ಹೇಳಿಕೆ ಲಾಭ ಬಿಜೆಪಿಗೆ ಶೇಕಡಾ 56 ರಷ್ಟು ಲಾಭವಾಗಲಿದೆ ಎಂದಿದೆ.